ಕನ್ನಡ ರಾಜ್ಯೋತ್ಸವದ ವರದಿ

ದಿನಾಂಕ -೧೧-೨೦೨೨

ಸಮಯ : 09:30 ಬೆಳಗ್ಗೆ

ಸ್ಥಳ - ಅಕ್ಷರ ಶಾಲೆಯ ಆವರಣಚನ್ನರಾಯಪಟ್ಟಣ, ಹಾಸನ

 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು :

  • ಶ್ರೀಮತಿ ರೂಪ ಅಶೋಕ್ ಶೆಟ್ಟಿ ಪ್ರಾಂಶುಪಾಲರು
  • ಶ್ರೀಮತಿ ಸುಪ್ರಿಯಾ ಗಣಿತ ಶಿಕ್ಷಕಿ
  • ಕುಮಾರಿ ಯೋಗಿತಾ ವಿಜ್ಞಾನ ಶಿಕ್ಷಕಿ
  • ಶಿಕ್ಷಕ ಶಿಕ್ಷಕಿಯರು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು

 

ಕಾರ್ಯಕ್ರಮದ ವಿವರ (ಕಾರ್ಯಸೂಚಿ):

  • ಪ್ರಾರ್ಥನೆ ಎರಡನೇ ತರಗತಿ ವಿದ್ಯಾರ್ಥಿಗಳು
  • ನಿರೂಪಣೆ ಶ್ರೀಮತಿ ಸುಧಾಮಣಿ - ಶಿಕ್ಷಕಿ
  • ಸ್ವಾಗತ ಭಾಷಣ ಶ್ರೀಮತಿ ರಂಜಿನಿ - ಶಿಕ್ಷಕಿ
  • ದೀಪ ಬೆಳಗುವ ಕಾರ್ಯಕ್ರಮ ಪ್ರಾಂಶುಪಾಲರು ಮತ್ತು ಮುಖ್ಯ ಅತಿಥಿಗಳು
  • ದಿನದ ಪ್ರಾಮುಖ್ಯತೆ ಶ್ರೀಮತಿ ಅರ್ಪಿತ - ಶಿಕ್ಷಕಿ
  • ಅತಿಥಿಗಳ ಭಾಷಣ
  • ವಿದ್ಯಾರ್ಥಿಗಳ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು  
  • ವಂದನಾರ್ಪಣೆ ಕುಮಾರಿ ಜೀವಿತ ಎಂಟನೇ ತರಗತಿ ವಿದ್ಯಾರ್ಥಿ

(ಪ್ರಕ್ರಿಯೆಗಳು / ವರದಿಗಳು) Proceedings/Reports:

  • ನವೆಂಬರ್ ೧ - ೨೦೨೨ ರಂದು ಅಕ್ಷರ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮೊದಲಿಗೆ ಈ ಕಾರ್ಯಕ್ರಮದಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು.
  • ನಂತರ ಶ್ರೀಮತಿ ಸುಧಾಮಣಿ ಸಮಾಜ ವಿಜ್ಞಾನ ಶಿಕ್ಷಕ ನಿರೂಪಣೆಯನ್ನು ನಿರೂಪಿಸಿದರು. ಶ್ರೀಮತಿ ರಂಜಿನಿ ಅವರು ಎಲ್ಲರಿಗೂ ಸ್ವಾಗತವನ್ನು ಕೋರಿದರು.
  • ಶ್ರೀಮತಿ ರೂಪ ಅಶೋಕ್ ಶೆಟ್ಟಿ, ಅಕ್ಷರ ಶಾಲೆಯ ಪ್ರಾಂಶುಪಾಲರು ಮತ್ತು ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಸುಪ್ರಿಯ ಮತ್ತು ಕುಮಾರಿ ಯೋಗಿತಾ ಇವರೆಲ್ಲರೂ ತಾಯಿ ಭುವನೇಶ್ವರಿ ಚಿತ್ರಕ್ಕೆ ದೀಪ ಬೆಳಗಿದರು.
  • ಶಾಲೆಯ ಮತ್ತೊಬ್ಬ ಶಿಕ್ಷಕಿ ಶ್ರೀಮತಿ ಅರ್ಪಿತಾ ರವರು ದಿನದ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.
  • ಅತಿಥಿಗಳು ದಿನದ ಮಹತ್ವವನ್ನು ಮತ್ತಷ್ಟು ವಿವರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
  • ಕೆಲವು ಮಕ್ಕಳು ಕನ್ನಡ ನಾಡಿನ ಬಗ್ಗೆ ನೃತ್ಯದ ಮೂಲಕ ತಿಳಿಸಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿದರು.
  • ಕೊನೆಯದಾಗಿ 8ನೇ ತರಗತಿ ವಿದ್ಯಾರ್ಥಿನೇ ಕುಮಾರಿ ಜೀವಿತ ರವರು  ವಂದನಾರ್ಪಣೆಯನ್ನು ನಡೆಸಿಕೊಟ್ಟರು.
  • ಹೀಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತು.

 

ವರದಿ ಸಲ್ಲಿಸಿದವರು  ಶ್ರೀಮತಿ. ರಂಜಿನಿ ಜಿ.ಎಂ

 

Roopa Ashok Shetty

Principal-ASE